ಅಭಿಪ್ರಾಯ / ಸಲಹೆಗಳು

ಪರಿಚಯ

          ತುಮಕೂರು ಕಂದಾಯ ಜಿಲ್ಲೆಯಲ್ಲಿ ಮಧುಗಿರಿ ಒಂದು ಪ್ರಮುಖ ತಾಲ್ಲೂಕು ಕೇಂದ್ರ, ಶೈಕ್ಷಣಿಕವಾಗಿ ಒಂದು ಜಿಲ್ಲೆಯಾಗಿದೆ. ನಿರ್ದೇಶಾಂಕಗಳು 13.66° N 77.21° ಇದ್ದು. ಇಲ್ಲಿಯ ಬೆಟ್ಟದಲ್ಲಿ ಸಿಗುವ ಮಧು (ಜೇನು) ನಿಂದ ಮಧುಗಿರಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಮಧುಗಿರಿ ಕೋಟೆ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯಲ್ಲಿದೆ. ಮಧುಗಿರಿಯು ಒಂದು ಏಕೈಕ ಬೆಟ್ಟವಾಗಿದ್ದು ಇಡೀ ಏಷ್ಯಾದಲ್ಲೇ ಎರಡನೇ ಅತ್ಯಂತ ದೊಡ್ಡ ಏಕಶಿಲೆಯಾಗಿದೆ. ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಈ ಸಣ್ಣ ಪಟ್ಟಣವು ತನ್ನ ಕೋಟೆ ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ಕೋಟೆಯನ್ನು ಭೇಟಿ ಮಾಡಲು ಹಲವು ಪ್ರವಾಸಿಗರು ಮಧುಗಿರಿಯನ್ನು ಭೇಟಿ ಮಾಡುತ್ತಾರೆ, ಇದು ವಿಜಯನಗರ ಸಾಮ್ರಾಜ್ಯದಿಂದ ನಿರ್ಮಾಣಗೊಂಡಿದೆ. ಈ ಕೋಟೆಯು ಬೆಟ್ಟದ ಕಡಿದಾದ ಇಳಿಜಾರಿನ ಮೇಲೆ ಇದೆ. ಈ ಕೋಟೆಯನ್ನು ಭೇಟಿ ಮಾಡಲು ಅನೇಕ ಪ್ರವಾಸಿಗರು ಮಧುಗಿರಿ ಆಗಮಿಸುತ್ತಾರೆ, ಇದು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ ಮತ್ತು ಇದನ್ನು ವಿಜಯನಗರ ಸಾಮ್ರಾಜ್ಯ ನಿರ್ಮಿಸಿದೆ. ಈ ಕೋಟೆಯು ಬೆಟ್ಟದ ಕಡಿದಾದ ಇಳಿಜಾರಿನ ಮೇಲೆ ಇದೆ.

ಇದು ಹಿಂದೆ ಮೈಸೂರು ರಾಜರ ಒಡೆತನದಲ್ಲಿ ಒಂದು ಮುಖ್ಯ ಠಾಣೆಯಾಗಿತ್ತು ಮತ್ತು ಸಿದ್ದನಾಯಕನೆಂಬ ಸೈನ್ಯಾಧಿಕಾರಿಯು ಆಡಳಿತ ಮಾಡುತಿದ್ದನು. ಬೆಟ್ಟದಲ್ಲಿ ಈಗಲೂ ಒಂದು ಕೋಟೆ ಇದೆ. ಇಲ್ಲಿ ಇರುವ ದಂಡಿನ ಮಾರಮ್ಮ ದೇವಿ ಶಕ್ತಿ ದೇವತೆ ಬಹಳ ಪ್ರಸಿದ್ದಿ. ಹಿಂದೆ ಇಲ್ಲಿನ ಬೆಟ್ಟದಲ್ಲಿ ಸೀತಾಫಲ ಮತ್ತು ದಾಳಿಂಬೆ ಹಣ್ಣುಗಳು ಬಹಳ ಬೆಳೆಯುತ್ತಿದ್ದವು. ಈ ಪ್ರದೇಶದ ಪ್ರಮುಖ ಬೆಳೆಗಳು ಕಡಲೇಕಾಯಿ, ರಾಗಿ, ಮಾವು ಹಾಗೂ ಜೋಳ. ಇಲ್ಲಿ ರೇಶಿಮೆ ಮತ್ತು ತೆಂಗು ಕೂಡ ಬೆಳೆಯಲಾಗುತ್ತದೆ.

ಮಧುಗಿರಿಯ ಕೋಟೆಯಿಂದ ಎಡಕ್ಕೆ ಹೊದರೆ ಸಿದ್ದರಕಟ್ಟೆ ಎಂಬ ಒಂದು ಸಣ್ಣ ಕೆರೆ ಇದೆ ಅದು ನೊಡಲು ತುಂಬ ಚೆನ್ನಾಗಿದೆ.ಹಾಗೆ ಸಿರ ಗೇಟ್ ನ ಬಳಿ ಒಂದು ಕಲ್ಯಾಣಿ ಇದೆ. ಇಲ್ಲಿಂದ ಸ್ವಲ್ಪ ದೂರದಲ್ಲೇ ಔಷಧೀಯ ಮೂಲಿಕೆಗಳಿಗೆ ಪ್ರಸಿದ್ಧವಾದ ಸಿದ್ಧರ ಬೆಟ್ಟವೂ ಇದೆ. ಮಧುಗಿರಿ ಯಿಂದ ಸುಮಾರು ೨೦ಕಿಮೀ ದೂರದಲ್ಲಿ ಮೈದನಹಳ್ಳಿ ಎಂಬಲ್ಲಿ ಕೃಷ್ಣಮೃಗಗಳ ವನ್ಯಧಾಮವನ್ನು 1993 ರಲ್ಲಿ ಪ್ರಾರಂಭಿಸಲಾಯಿತು. ಇದು ಕರ್ನಾಟಕ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.

ಮಧುಗಿರಿಯ ಪಾಳೇಗಾರರ ಪ್ರಮುಖ ಕೋಟೆಗಳಲ್ಲಿ ಮುಖ್ಯವಾದವು ಕೊಡಗದಾಲ, ಮಿಡಿಗೇಶಿ ಕೋಟೆಗಳು. ವಿಶೇಷಾಂದ್ರೆ ಇಂದಿಗೂ ಕೋಡಗದಾಲ ಕೋಟೆಯಲ್ಲಿ ಜನ ವಾಸವಿದೆ. ಮುಖ್ಯವಾಗಿ ಮಧುಗಿರಿ ಪಾಳೇಗಾರರಿಗೆ ಹಾಗೂ ಅವರ ಸೈನಿಕರಿಗೆ ಹೆಂಡ ಸಾಗಿಸುತ್ತಿದ್ದ ಈಡಿಗರಲ್ಲಿ ಕೆಲವರು ಕೋಟೆಯಲ್ಲೇ ವಾಸಿಸುತ್ತಿದ್ದಾರೆ. ಇನ್ನುಳಿದ ಮೂಲ ಈಡಿಗರು ಪಕ್ಕದ ಕ್ಯಾಶವಾರದಲ್ಲಿ ನೆಲೆಸಿದ್ದಾರೆ.

ಬಯಲು ಪ್ರದೇಶವಾಗಿದ್ದು ಗಣಿಗಾರಿಕೆಯ ಪ್ರಮುಖ ತಾಣವಾಗಿದೆ. ಶೈಕ್ಷಣಿಕ ಜಿಲ್ಲೆಯು 4 ತಾಲ್ಲೂಕುಗಳನ್ನು ಹೊಂದಿದೆ, ಕೊರಟಗೆರೆ,ಮಧುಗಿರಿ,ಪಾವಗಡ,ಮತ್ತು ಶಿರಾ. ಶಿರಾ ತಾಲ್ಲೂಕು ವಿಸ್ತೀರ್ಣದಲ್ಲಿ ಅತಿ ದೊಡ್ಡ ತಾಲ್ಲೂಕು ಆಗಿದ್ದು 1532 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ನಂತರ ಪಾವಗಡ 1358 ಚ.ಕಿ.ಮೀ ವಿಸ್ತೀರ್ಣ, ಮಧುಗಿರಿ 1131 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದರೆ ಕೊರಟಗೆರೆ 652 ಚ.ಕಿ.ಮೀ ವಿಸ್ತೀರ್ಣ ಹೊಂದಿ ಅತಿ ಚಿಕ್ಕ ತಾಲ್ಲೂಕು ಆಗಿದೆ.

      ಪ್ರಸ್ತುತ ಮಧುಗಿರಿ ಶೈಕ್ಷಣಿಕ ಜಿಲ್ಲೆ 525 ಹಿರಿಯ ಪ್ರಾಥಮಿಕ ಶಾಲೆಗಳು ಇದ್ದು, ಕೊರಟಗೆರೆ 92, ಮಧುಗಿರಿ143, ಪಾವಗಡ 117, ಶಿರಾ 173, ಹಿರಿಯ ಪ್ರಾಥಮಿಕ ಶಾಲೆಗಳನ್ನು ಹೊಂದಿದೆ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ 3 ತಾಲ್ಲೂಕುಗಳು ಮಧುಗಿರಿ, ಪಾವಗಡ, ಶಿರಾ ನೇರೆ ರಾಜ್ಯವಾದ ಆಂದ್ರ ಪ್ರದೇಶದ ಗಡಿಯನ್ನು ಹೊಂದಿದ್ದು ಶೈಕ್ಷಣಿಕವಾಗಿ ಮತ್ತು ಭೌಗೋಳಿಕವಾಗಿ ಮಹತ್ವ ಎನಿಸಿಕೊಳ್ಳುತ್ತದೆ.

 

ಇತ್ತೀಚಿನ ನವೀಕರಣ​ : 06-09-2022 11:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಧುಗಿರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080