ಅಭಿಪ್ರಾಯ / ಸಲಹೆಗಳು

ನಿಷ್ಠಾ ಆನ್‌ಲೈನ್ ತರಬೇತಿ

ನಿಷ್ಠಾ ತರಬೇತಿ”


        "
ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರ ಸಮಗ್ರ ಮುನ್ನಡೆಗಾಗಿ ರಾಷ್ಟ್ರೀಯ ಉಪಕ್ರಮ ”

 

ನಿಷ್ಠಾ ತರಬೇತಿ ಭಾರತ ದೇಶದಾದ್ಯಂತ ನಡೆಯುತ್ತಿರುವ ಒಂದೇ ತೆರನಾದ ತರಬೇತಿ ಇದಾಗಿದ್ದು, ಇಡೀ ದೇಶದಲ್ಲಿ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಕರ್ನಾಟಕದ 1, 53, 000 ಶಿಕ್ಷಕರು ಈ ತರಬೇತಿಯನ್ನು ಪಡೆಯಲಿದ್ದಾರೆ. ತರಬೇತಿಯು 18 ಮಾಡ್ಯೂಲ್‌ಗಳನ್ನು ಹೊಂದಿದೆ. ಇದರಲ್ಲಿ 12 ಮಾಡ್ಯೂಲ್‌ಗಳು ಪಠ್ಯ ವಿಷಯದ ಅಂತರ್ಗತ ಕಲಿಕೆಯೊಂದಿಗೆ ಕೂಡಿವೆ. ಉಳಿದ 6 ಮಾಡ್ಯೂಲ್ ಗಳಲ್ಲಿ ನಾಯಕತ್ವ, ಶಾಲಾಪೂರ್ವ ಶಿಕ್ಷಣ, ಶಾಲಾ ಶಿಕ್ಷಣದ ಉಪಕ್ರಮಗಳು , ವೃತ್ತಿ ಪೂರ್ವ ಶಿಕ್ಷಣ , ಕೋವಿಡ್- 19ರ ಸನ್ನಿವೇಶ- ಶಾಲಾ ಶಿಕ್ಷಣದಲ್ಲಿ ಸವಾಲು ಎದುರಿಸುವುದು , ಮಕ್ಕಳ ಹಕ್ಕುಗಳು, ಪೋಸ್ಕೊ ಕಾಯ್ದೆ – ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆಗೆ  ಸಂಬಂಧಿಸಿದ  ಮಾಡ್ಯೂಲ್ ಗಳಾಗಿವೆ.

 

ನಿಷ್ಠಾ ತರಬೇತಿಯ ಮುಖ್ಯ ಉದ್ದೇಶಗಳು :

 • ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳಲ್ಲಿ ಹೊಸ ಬೋಧನಾ ಕಲಿಕಾ ಪದ್ಧತಿಗಳ ದೃಷ್ಟಿಕೋನಗಳನ್ನು ಅರ್ಥೈಸಿಕೊಳ್ಳುವಂತೆ ಮಾಡುವುದರ ಮೂಲಕ ಮಕ್ಕಳು ಕಲಿಕಾ ಫಲಗಳನ್ನು ಉತ್ತಮವಾಗಿ ಗಳಿಸುವಂತೆ ಮಾಡುವುದು, ಇದಕ್ಕಾಗಿ ಅವರ ಸಾಮರ್ಥ್ಯಗಳನ್ನು ವೃದ್ಧಿಸುವುದು.
 • ಶಿಕ್ಷಕರು ಶಾಲಾಧಾರಿತ ಮೌಲ್ಯಾಂಕನವನ್ನು  ತಮ್ಮ ಶಾಲೆಗಳಲ್ಲಿ ಅನುಷ್ಠಾನ ಗೊಳಿಸುವಂತೆ ಮಾಡುವುದು
 • ಪ್ರತಿ ತರಗತಿಯ ವಿಷಯಗಳಲ್ಲಿ ನಿಗದಿಪಡಿಸಿದ ಎಲ್ಲಾ ಕಲಿವಿನ ಫಲಗಳನ್ನು ಮಕ್ಕಳು ಗಳಿಸುವಂತೆ ಮಾಡಲು ಶಿಕ್ಷಕರ ಸಾಮರ್ಥ್ಯವನ್ನು ವೃದ್ಧಿಸುವುದು.
 • ಕಲಿಕಾ ಫಲಗಳು ರಾಷ್ಟ್ರೀಯ ಮೌಲ್ಯಾಂಕನ ಸಮೀಕ್ಷೆಯ ಅಂಶಗಳು ಇತ್ಯಾದಿಗಳ ಅನುಪಾಲನೆಗಾಗಿ ರಾಜ್ಯಗಳ  ಶಾಲಾ ಬೆಂಬಲ ವ್ಯವಸ್ಥೆಯನ್ನು ಉತ್ತಮಗೊಳಿಸಿ ಶಾಲೆಗಳಲ್ಲಿ ನಾವಿನ್ಯತಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಮುಖ್ಯ ಶಿಕ್ಷಕರನ್ನುಸಿದ್ಧಗೊಳಿಸುವುದು.
 • 3/11/2020 ರಿಂದ ಪ್ರತೀ ಪಾಕ್ಷಿಕದಲ್ಲಿ 3 ಮಾಡ್ಯೂಗಳನ್ನು “ ಕರ್ನಾಟಕದಲ್ಲಿ ಶಾಲಾ ಶಿಕ್ಷಣ” ವೆಬ್ಸೈಟ್schooleducation.kar.nic.inನಲ್ಲಿ ಅಪ್ಲೋಡ್ ಮಾಡುತ್ತಿದ್ದು ಪ್ರತಿಯೊಬ್ಬ ಕನ್ನಡ ಹಾಗೂ ಉರ್ದು ಮಾಧ್ಯಮದ ಎಲ್ಲಾ ಶಿಕ್ಷಕರು ಎಲ್ಲಾ 18 ಮಾಡ್ಯೂಲ ಗಳನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ.
 • ಪ್ರತಿಯೊಬ್ಬ ಶಿಕ್ಷಕರು ದೀಕ್ಷಾ ಆಪ್  ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
  schooleducation.kar.nic.inಗೆ ಕ್ಲಿಕ್ ಮಾಡಿ ಈ ವೆಬ್ ಸೈಟ್ ನಲ್ಲಿ ಬಲಗಡೆ ಇರುವ ಶಿಕ್ಷಕರ ತರಬೇತಿ ಮತ್ತು ವರ್ಗಾವಣೆ ತಂತ್ರಾಂಶದ ಬಟನ್ ಕ್ಲಿಕ್ ಮಾಡಿ ನಂತರ ಟೀಚರ್ ಪೋರ್ಟಲ್ ಗೆ ಹೋಗಿ ಅಲ್ಲಿ  ಕೆಜಿಐಡಿ ನಂಬರನ್ನು ಹಾಕಿ ಒಂದು ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳುವುದು. ಪಾಸ್ವರ್ಡ್ ಕ್ರಿಯೇಟ್ ಆದನಂತರ ಪಾಸ್ವರ್ಡ್ ಅನ್ನು ಬರೆದಿಟ್ಟುಕೊಂಡು ಅಲ್ಲಿ ಬಳಕೆ ಮಾಡದೇ, ನಿಮ್ಮ ಮೊಬೈಲ್ ನಲ್ಲಿ ಈಗಾಗಲೇ ಡೌನ್ಲೋಡ್ ಮಾಡಿಕೊಂಡ ದೀಕ್ಷಾ ಆಪ್ ಗೆ ಬಂದು ಸ್ಟೇಟ್ ಸಿಸ್ಟಮ್  ಮೂಲಕ ಲಾಗಿನ್ ಆಗಿ ನಂತರ ಕೋರ್ಸ್ ಗೆ ಹೋಗಿ ಲಾಗಿನ್ ಕೊಟ್ಟನಂತರ ಕೆಜಿಐಡಿ ನಂಬರ್ ಮತ್ತು ಸ್ಕೂಲ್ ಎಜುಕೇಶನ್ ವೆಬ್ಸೈಟ್ ನಲ್ಲಿ  ಕ್ರಿಯೇಟ್ ಮಾಡಿದ ಪಾಸ್ವರ್ಡ್ ಬಳಸಿ ಲಾಗಿನ್ ಆದರೆ ನೀವು ಕೋರ್ಸ್ ಗಳನ್ನು ಯಶಸ್ವಿಯಾಗಿ ಮುಗಿಸಬಹುದು. ಕೋರ್ಸ್ ಮುಕ್ತಾಯವಾದ ನಂತರ ಕೋರ್ಸ್ ಕಂಪ್ಲೀ ಶನ್ ಸರ್ಟಿಫಿಕೇಟ್ ದೊರೆಯುತ್ತದೆ. ಈ ಎಲ್ಲಾ ಮಾಡ್ಯೂಲ್‌ಗಳಲ್ಲಿ  ಕಲಿತ ಅಂಶಗಳನ್ನು ತರಗತಿ ಕೋಣೆಯೊಳಗೆ  ಅನುಷ್ಠಾನ ಮಾಡಲು ಎಲ್ಲಾ ಶಿಕ್ಷಕರು ಮತ್ತು ಮುಖ್ಯಶಿಕ್ಷಕರು ಕ್ರಮವಹಿಸಲು ಕೋರಿದೆ.

 

ಇತ್ತೀಚಿನ ನವೀಕರಣ​ : 06-09-2022 11:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಧುಗಿರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080