ಅಭಿಪ್ರಾಯ / ಸಲಹೆಗಳು

ಟ್ಯಾಲ್ಪ್ (TALP)– ಐಟಿ ಅಟ್ ಸ್ಕೂಲ್ಸ್ಇನ್ ಕರ್ನಾಟಕ

ಟ್ಯಾಲ್ಪ್ (TALP)– ಐಟಿ  ಅಟ್ ಸ್ಕೂಲ್ಸ್ಇನ್ ಕರ್ನಾಟಕ

 

ಹಿನ್ನೆಲೆ:

 

   ಶಿಕ್ಷಕರ ತರಬೇತಿ–ತಂತ್ರಜ್ಞಾನಬೆಂಬಲಿತ ಕಲಿಕಾ ಕಾರ್ಯಕ್ರಮ (Technology Assisted Learning Programme (TALP)) 2016-17 ನೇಸಾಲಿನಲ್ಲಿ ಜಿಲ್ಲೆಯ ಸರ್ಕಾರಿಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು. ಸದರಿ ಕಾರ್ಯಕ್ರಮದಡಿಯಲ್ಲಿ ಒಂದು ಭಾಗವಾಗಿ ಐಟಿ@ಸ್ಕೂಲ್ಸ್ ಇನ್‌ ಕರ್ನಾಟಕ ಯೋಜನೆಯನ್ನುಅನುಷ್ಠಾನಗೊಳಿಸಲಾಗಿದೆ. ಶಿಕ್ಷಕರು ತಮ್ಮ ಕಲಿಕೆಯನ್ನು ಅನುಕೂಲಿಸುವ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನ (ಐ.ಸಿ.ಟಿ.) ಕೌಶಲಗಳನ್ನು ಬಳಸುವುದಷ್ಟೇ ಅಲ್ಲದೇ ತಮ್ಮ ವೃತ್ತಿಪರ ವರ್ತನೆಗಳನ್ನು ಪುನಶ್ಚೇತನಗೊಳಿಸಿಕೊಳ್ಳಲು ಮತ್ತು ತಮ್ಮ ಬೋಧನಾ-ಕಲಿಕಾ ಪ್ರಕ್ರಿಯೆಗಳಿಗೆ ಅಗತ್ಯವಾದ ಇ-ಸಂಪನ್ಮೂಲಗಳನ್ನು ತಾವೇಸೃಜಿಸಿಕೊಳ್ಳುವಂತೆ ತರಬೇತಿನೀಡಿ ಸಕ್ರಿಯಗೊಳಿಸುವುದೇ ಈ ‘ಐಟಿ@ಸ್ಕೂಲ್ಸ್ ಇನ್ ಕರ್ನಾಟಕ’ಯೋಜನೆಯಗುರಿಯಾಗಿದೆ.

 

ಈ ತರಬೇತಿ ಕಾರ್ಯಕ್ರಮವು 2 ಹಂತಗಳನ್ನುಹೊಂದಿದೆ.

ಹಂತ 1: ಇಂಡಕ್ಷನ್-1

10 ದಿನಗಳ ಮುಖಾ-ಮುಖಿ ತರಬೇತಿ.ಇಲ್ಲಿ ಶಿಕ್ಷಕರು ಕಂಪ್ಯೂಟರ್‌  ಹಾರ್ಡ್ವೇರ್, ಸಾಫ್ಟ್ವೇರ್, ಇಂಟರ್ನೆಟ್ ಮತ್ತು ಮೈಕ್ರೋ ಸಾಫ್ಟ್‌ ಆಫೀಸ್ ನ ಮೂಲ ಜ್ಞಾನ ಮತ್ತು ಕೌಶಲಗಳನ್ನು ಗಳಿಸುತ್ತಾರೆ.

 

ಹಂತ 2: ರಿಫ್ರೆಶರ್ಕೋರ್ಸ್-1

10ದಿನಗಳ ಮುಖಾ-ಮುಖಿ ತರಬೇತಿ.ಇಲ್ಲಿ ಶಿಕ್ಷಕರು ತಮ್ಮದೇ ಇ-ಸಂಪನ್ಮೂಲಗಳನ್ನು ಸೃಜಿಸಿಕೊಳ್ಳಲು  ಅಗತ್ಯವಾದ ಅನೇಕ ತಂತ್ರಜ್ಞಾನ ಮತ್ತು ಅಪ್ಲಿಕೇಶನ್ ಗಳನ್ನುಅರಿಯುತ್ತಾರೆ.

 

 

ತರಬೇತಿಯಫಲಿತಗಳು:

1.ಟಿ.ಎ.ಎಲ್.ಪಿ. ತರಬೇತಿಗಳಲ್ಲಿ ಡಿಜಿಟಲ್‌ ವಿಧಾನಗಳು ಮತ್ತು ಅನ್ವಯಗಳ ತರಬೇತಿ ಕಾರಣದಿಂದ ಶಿಕ್ಷಕರು ಅಂತರ್ಜಾಲ ಸಂಪನ್ಮೂಲಗಳನ್ನು ಪಡೆಯಲು ಅಲ್ಲದೇ ತಮಗೆ ಅಗತ್ಯ ಸಂಪನ್ಮೂಲಗಳನ್ನು ವಿವಿಧ ತಂತ್ರಾಂಶಗಳಿಂದ ತಾವೇ ಸೃಜಿಸಿಕೊಳ್ಳುವುದು ಹಾಗೂ ಅವುಗಳನ್ನು ತಮ್ಮಸಹೋದ್ಯೋಗಿಗಳೊಂದಿಗೆ ಇ-ಮೇಲ್ಸ್ ಮುಖಾಂತರ ಹಂಚಿಕೊಳ್ಳುವುದುಸಾಧ್ಯವಾಗಿದೆ.

2.ಶಿಕ್ಷಕರು ಐ.ಸಿ.ಟಿ.ಗೆಸಂಬಂಧಿಸಿದ ಜಾಲಗಳನ್ನುಬಳಸಲು ತಿಳಿದಿದ್ದಾರೆ.

3.ಅನೇಕ ಶಿಕ್ಷಕರುಟಿ.ಎ.ಎಲ್.ಪಿ. ತರಬೇತಿಗಳಲ್ಲಿ ಕಲಿಸಲ್ಪಟ್ಟಿರುವ ಫ್ರೀ ಅಂಡ್ ಓಪನ್ ಸಾಫ್ಟ್‌ ವೇರ್ (FOSS) ಮತ್ತು ಅಪ್ಲಿಕೇಶನ್ ಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯು ಕರ್ನಾಟಕದಲ್ಲಿ ಶಿಕ್ಷಣದಲ್ಲಿ ಅಳವಡಿಸಲು ಉದ್ದೇಶಿಸಿರುವ ಐ.ಸಿ.ಟಿ. ವಿಧಾನಗಳನ್ನುರಾಷ್ಟ್ರೀಯ ಐ.ಸಿ.ಟಿ. ಶಿಕ್ಷಣ ನೀತಿಯೊಂದಿಗೆ ಸಂಯೋಜಿಸುತ್ತದೆ. ಇದು FOSS ತಂತ್ರಾಂಶಗಳ ಬಳಕೆಯನ್ನು ಶಿಫಾರಸ್ಸು ಮಾಡುತ್ತದೆ ಮತ್ತು ಸಾಪ್ಟ್‌ವೇರ್‌ಗಳ ಕಳ್ಳತನವನ್ನು  ಕ್ರಮೇಣ ನಿಯಂತ್ರಿಸುತ್ತದೆ.

 

 

TALP ಕಾರ್ಯಕ್ರಮದಡಿಯಲ್ಲಿ IT@Schools in Karnataka ಕಾರ್ಯಯೋಜನೆಯಲ್ಲಿ 2016-17 ರಿಂದ 2018-19 ರವರೆಗೆ ಆಯ್ಕೆಗೊಂಡ ಶಾಲೆಗಳ ಸಂಖ್ಯೆಯ ವಿವರ.

ಕ್ರ.ಸಂ

ಜಿಲ್ಲೆಯಹೆಸರು

ಒಟ್ಟುಶಾಲೆಗಳು

2016-17

2017-18

2018-19

ಒಟ್ಟು

ಉಳಿಕೆಶಾಲೆಗಳು

01

ಮಧುಗಿರಿ

95

24

12

15

51

44

 

ಇತ್ತೀಚಿನ ನವೀಕರಣ​ : 01-09-2020 07:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಧುಗಿರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080