ಅಭಿಪ್ರಾಯ / ಸಲಹೆಗಳು

ಗುರುಚೇತನ ತರಬೇತಿ ಕಾರ್ಯಕ್ರಮ

ಗುರುಚೇತನ

      “ಗುರುಚೇತನ” ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಜಾರಿಗೊಳಿಸುತ್ತಿದೆ.ಶಿಕ್ಷಕರನ್ನು ಅಭಿವೃದ್ಧಿಗೊಳಿಸಲು ದೀರ್ಘಾವಧಿಯ  ಯೋಜನೆಯ ಅಗತ್ಯವಿದ್ದು, ಇದಕ್ಕಾಗಿ  ವಿಶೇಷವಾದ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಪಠ್ಯಕ್ರಮವನ್ನು ರೂಪಿಸಲಾಗಿದೆ. ಈ ನವೀನ ಯೋಜನೆಯಲ್ಲಿ ಶಿಕ್ಷಕರು ಸ್ವಾಯತ್ತವಾಗಿ ತಮ್ಮ ವೃತ್ತಿಪರ ಅಭಿವೃದ್ಧಿಗೆ ಮಾಡ್ಯೂಲ್‌ಗಳನ್ನು ತಾವೇ ಆಯ್ಕೆಮಾಡಿಕೊಂಡು ತೊಡಗಿಕೊಳ್ಳುವ ಸುವರ್ಣಾವಕಾಶ ಒದಗಿಸಿದೆ.ಇವುಗಳು ತರಗತಿ ಪ್ರಕ್ರಿಯೆಯನ್ನು ರೂಪಿಸುವುದಕ್ಕೆ ನೆರವಾಗುವ ಶಿಕ್ಷಣದ ತಾತ್ವಿಕತೆ, ವಿಷಯದ ಸ್ವರೂಪ, ವಿವಿಧ ಬೋಧನಾ ಕಲಿಕಾ ವಿಧಾನ ಮತ್ತು  ವಿಷಯಗಳ ಸಮ್ಮಿಲನ, ಕಲಿಕೆಯನ್ನು ಅನುಭವಾತ್ಮಕವಾಗಿ ಮತ್ತು ಮಗುವಿನ ಸಂದರ್ಭಕ್ಕೆ ಪೂರಕವಾಗಿ ಅನುಕೂಲಿಸುವ ಶೈಕ್ಷಣಿಕ ದೃಷ್ಟಿಕೋನಗಳನ್ನು ಒಳಗೊಂಡಿರುತ್ತವೆ. ಗುರುಚೇತನ ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ,ವಿಜ್ಞಾನ,ಗಣಿತ,ಸಮಾಜವಿಜ್ಞಾನ, ನಲಿಕಲಿ,ಶೈಕ್ಷಣಿಕದೃಷ್ಟಿಕೋನವಿಷಯದಲ್ಲಿ ಮಾಡ್ಯೂಲ್‌ಗಳು ಸಿದ್ಧಗೊಂಡಿವೆ.

 

ಉದ್ದೇಶಗಳು

  • ಶಿಕ್ಷಕರನ್ನು ಚಿಂತನ ಶೀಲ ಅಭ್ಯಾಸಿಗರನ್ನಾಗಿ (Reflective Practitioner) ಮಾಡುವುದು
  • ಶಿಕ್ಷಕರು ಸ್ವಪ್ರೇರಣೆಯಿಂದ ವೃತ್ತಿಪರ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು  ಕಲ್ಪಿಸುವುದು
  • ಮಕ್ಕಳ ಕಲಿಕೆಯ ಅವಕಾಶಗಳನ್ನು ಅರ್ಥೈಸಲು ಮತ್ತು ಅನುಕೂಲಿಸಲು ಸ್ವಾಯತ್ತ ಶಿಕ್ಷಕರನ್ನು ರೂಪಿಸುವುದು

ಕಾರ್ಯಕ್ರಮದ ವಿಶೇಷತೆಗಳು

ಶಿಕ್ಷಕರು ತಮ್ಮ ವೃತ್ತಿ ಬೆಳವಣಿಗೆಯ ಅಗತ್ಯ ಹಾಗೂ ಆಸಕ್ತಿಗೆ ತಕ್ಕಮಾಡ್ಯೂಲ್‍ಗಳನ್ನು ಆಯ್ಕೆ ಮಾಡಿಕೊಂಡು ಭಾಗವಹಿಸುವ ಅವಕಾಶವಿದೆ.

ದೀರ್ಘಕಾಲದಲ್ಲಿ ಶಿಕ್ಷಕರ ಅಭಿವೃದ್ಧಿಯನ್ನು ಯೋಜಿಸಲು ನೆರವಾಗಲು “ಶಿಕ್ಷಕರಅಭಿವೃದ್ಧಿಪಠ್ಯಕ್ರಮ”ವನ್ನು ಇಲಾಖೆರೂಪಿಸಿದೆ, ಅದರಲ್ಲಿ ಶಿಕ್ಷಕರ ಅಭಿವೃದ್ಧಿಗೆ ಮುಂದಿನ 5 ವರ್ಷಗಳಿಗೆ ಅಗತ್ಯವಾದ ಥೀಮ್‍ಗಳನ್ನು ಗುರುತಿಸಿದೆ.

ಕನ್ನಡ ಮಾಧ್ಯಮದಲ್ಲಿ 42 ಮಾಡ್ಯೂಲ್‌ಗಳು, ಉರ್ದು ಮಾಧ್ಯಮದಲ್ಲಿ 24 ಮಾಡ್ಯೂಲ್‌ಗಳು ಹಾಗೂ ಮರಾಠಿ ಮಾಧ್ಯಮದಲ್ಲಿ 20 ಮಾಡ್ಯೂಲ್‌ಗಳನ್ನುರಚಿಸಿದೆ.

ಶಿಕ್ಷಕರು ಮಾಡ್ಯೂಲ್ ಆಯ್ಕೆಸಂದರ್ಭದಲ್ಲಿ ಅವರು ಬೋಧಿಸುವ ವಿಷಯಕ್ಕೆ ಸೀಮಿತವಾಗದೆ, ಅವರ ಆಸಕ್ತಿ ಹಾಗೂ ಅಗತ್ಯತೆ ಇರುವ ಯಾವುದೇ ಮಾಡ್ಯೂಲ್‍ಗಳನ್ನು ಆಯ್ಕೆಮಾಡಲು ಅವಕಾಶ ಕಲ್ಪಿಸಿದೆ.

ಶಿಕ್ಷಕರ ಮಾಡ್ಯೂಲ್‌ಗಳಿಗೆ ನೀಡಿದ ಆದ್ಯತೆಗಳಿಗೆ ಅನುಸಾರವಾಗಿ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಅವಕಾಶಕಲ್ಪಿಸಿದೆ.

ವಿಷಯಪರಿಕರ, ಸಂಶೋಧನೆ ಮತ್ತು ವಿವಿಧ ಜ್ಞಾನಕ್ಷೇತ್ರಗಳ ಸಮಗ್ರತೆಯ ಆಶಯ ಹೊಂದಿದ ಮಾಡ್ಯೂಲ್‍ಗಳನ್ನು ಕಾರ್ಯಾಗಾರದ ಪೂರ್ವದಲ್ಲೇ ಅಧ್ಯಯನ ಮಾಡಲು ವೆಬ್‍ಸೈಟ್‍ನಲ್ಲಿ ಅಳವಡಿಸಲಾಗಿದೆ.

ಕಾರ್ಯಾಗಾರಗಳು ವಿಕೇಂದ್ರಿಕೃತ, ಸಹವರ್ತಿ, ಸುಸ್ಥಿರ ಸ್ವಕಲಿಕೆಯ ಅವಕಾಶವನ್ನು ಶಿಕ್ಷಕರಿಗೆ ಒದಗಿಸುತ್ತವೆ.

ಶಿಕ್ಷಕರು ತಂಡವಾಗಿ ನಿರಂತರ ಕಲಿಕೆಯ ಸಂಸ್ಕೃತಿಯನ್ನು ಹುಟ್ಟುಹಾಕುವ ಮೂಲಕ ಸಮರ್ಥಶಿಕ್ಷಕರನ್ನು ಅಭಿವೃದ್ಧಿಗೊಳಿಸುವ ಆಶಯ ಹೊಂದಿದೆ.

ಟಿ.ಟಿ.ಎಂ.ಎಸ್.(TTMS-Teacher Training Management System) ಪ್ರತ್ಯೇಕ ಪೋರ್ಟಲ್‌ನ್ನುರಚಿಸಲಾಗಿದ್ದುಇದರಲ್ಲಿ ಶಿಕ್ಷಕರು 6 ಮಾಡ್ಯೂಲ್‌ಗಳ ಆಯ್ಕೆಗಳನ್ನು ನಮೂದಿಸಬಹುದಾಗಿದೆ.

ಶಿಕ್ಷಕರ ಮಾಡ್ಯೂಲ್ ಆಯ್ಕೆ ನಂತರ ಬ್ಯಾಚ್ ರಚನೆಯಾದ ಮೇಲೆ ಕಾರ್ಯಾಗಾರ ನಡೆಯುವ ದಿನಾಂಕ ಮತ್ತುಸ್ಥಳದ ಬಗ್ಗೆ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್‌ ಸಂದೇಶ ರವಾನೆಯಾಗುತ್ತದೆ.

 

) ಇದುವರೆಗಿನಪ್ರಗತಿ

 

1.ಶಿಕ್ಷಕರು ತಮ್ಮ ಡಿಜಿಟಲ್ ಆಯ್ಕೆ ಮಾಡಲು ಅನುಗುಣವಾಗಿ ಪ್ರತ್ಯೇಕ ವೆಬೆಸೈಟ್‌ ಮತ್ತು ಪೋರ್ಟಲ್ ಆರಂಭಿಸಲಾಗಿದೆ.

2.ಪ್ರತಿಯೊಬ್ಬ ಶಿಕ್ಷಕರು ನಾಲ್ಕು ಆದ್ಯತೆಗಳನ್ನು ನೀಡಿ ಅದರಲ್ಲಿ ಪ್ರಸಕ್ತ ವರ್ಷ ಎರಡು ಮಾಡ್ಯೂಲ್ ಗಳ ಅನುಭವ ಪಡೆಯಲು ಅವಕಾಶವಿದೆ.

3.ಟಿ.ಟಿ.ಎಂ.ಎಸ್ ತಂತ್ರಾಂಶದ ಮೂಲಕ ಬ್ಯಾಚ್‌ ಮೇಕಿಂಗ್‌ ಮಾಡಿ ಶಿಕ್ಷಕರನ್ನು ಎಸ್.ಎಂ.ಎಸ್ ಮೂಲಕ ಆಹ್ವಾನಿಸಲಾಗಿದೆ.

4.ಡಯಟ್‌  ಪ್ಯಾಕಲ್ಟಿ/ ಪ್ರೌಢ ಶಾಲಾ ಮುಖ್ಯಶಿಕ್ಷಕರು/ ವಿಷಯ ಪರಿವೀಕ್ಷಕರನ್ನು ಗುರುಚೇತನ ಕಾರ್ಯಾಗಾರಗಳ ಪರಿಣಿತ ವೀಕ್ಷಕರನ್ನಾಗಿ ಡಯಟ್ ನೇಮಿಸಿದೆ.

5.ಪ್ರತಿ ಕಾರ್ಯಾಗಾರದಲ್ಲಿ ಪೂರ್ವಪರೀಕ್ಷೆ, ದೈನಂದಿನ ಮೌಲ್ಯಾಂಕನ, ಸಾಫಲ್ಯ ಪರೀಕ್ಷೆಯನ್ನು ನಡೆಸಿ ಅದನ್ನು ಆನ್ ಲೈನ್‌ ನಲ್ಲಿ ದಾಖಲಿಸಲಾಗುತ್ತಿದೆ.

6.ಎಲ್ಲಾ ಕಾರ್ಯಾಗಾರಗಳು ಮುಕ್ತಾಯವಾದ ನಂತರ ಡಯಟ್ ಗಳ  ಮುಖಾಂತರ ಸರಳ (ಕೇಸ್ಸ್ಟಡಿ) ಅಧ್ಯಯನಗಳನ್ನು ಕೈಗೊಳ್ಳಲಾಗುವುದು.

ಇತ್ತೀಚಿನ ನವೀಕರಣ​ : 01-09-2020 08:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಧುಗಿರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080